ಭಾರತದ ಪ್ರಧಾನ ಮಂತ್ರಿಯವರು ಲೋಕಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದಿಂದ ಅಥವಾ ಪಕ್ಷಗಳ ಮೈತ್ರಿತ್ವದಿಂದ ಆರಿಸಲ್ಪಟ್ಟ ನಾಯಕರು ಪ್ರಧಾನ ಮಂತ್ರಿಗಳಾಗುವರು. ಅವರು ಭಾರತ ಸರ್ಕಾರದ ಕಾರ್ಯಾಂಗದ ಮುಖ್ಯಸ್ಥರು ಮತ್ತು ಶಾಸಕಾಂಗದ ಸದಸ್ಯರಾಗಿರುತ್ತಾರೆ. ಸಾಂವಿಧಾನಿಕವಾಗಿ, ಭಾರತದ ಅಧ್ಯಕ್ಷರ ಪದವಿ ಪ್ರಧಾನ ಮಂತ್ರಿಯ ಪದವಿಗಿಂತ ಮೇಲಿನದ್ದು. ಆದರೆ ಸರ್ಕಾರದ ಚಟುವಟಿಕೆಗಳಲ್ಲಿ ಎಲ್ಲರಿಗಿಂತ ಹೆಚ್ಚು ಪ್ರಭಾವ ಹೊಂದಿರುವ ಪದವಿ ಪ್ರಧಾನ ಮಂತ್ರಿಗಳದ್ದು. ಭಾರತದ ಪ್ರಸಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಈ ವರೆಗೆ ಒಟ್ಟು ೧೨ ವ್ಯಕ್ತಿಗಳು ಭಾರತ ಪ್ರಧಾನ ಮಂತ್ರಿ ಸ್ಥಾನಕ್ಕೆ ಚುನಾಯಿಸಲ್ಪಟ್ಟಿದ್ದಾರೆ. ಇವರಲ್ಲಿ ಜವಾಹರಲಾಲ್ ನೆಹರು ಒಟ್ಟು ನಾಲ್ಕು ಅವಧಿಗಳಲ್ಲಿ ಪ್ರಧಾನ ಮಂತ್ರಿ ಗಳಾಗಿದ್ದರು. ಇಂದಿರಾ ಗಾಂಧಿ ಮೂರು ಅವಧಿಗಳ ಕಾಲ ಈ ಸ್ಥಾನದಲ್ಲಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಎರಡು ಅವಧಿಗಳಲ್ಲಿ ಈ ಸ್ಥಾನ ವಹಿಸಿದ್ದಾರೆ. ಗುಲ್ಜಾರಿ ಲಾಲ್ ನಂದಾ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಕೆಲಸ ನಿರ್ವಹಿಸಿದ್ದರು. ಡಾ.ಮನಮೋಹನ್ ಸಿಂಗ್ ಮೇ ೨೨, ೨೦೦೪ ಮೇ ೨೬, ೨೦೧೧ ಕಾಂಗ್ರೆಸ್ ಪಕ್ಷ(ಐ)ವರೆಗೆ ೨ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು. == ಪ್ರಧಾನ ಮಂತ್ರಿಯವರ ಭತ್ಯೆ ಮತ್ತು ವೇತನ- ವಸತಿ == ಭಾರತದ ಪ್ರಧಾನಿಯ ಅಧಿಕೃತ ನಿವಾಸ ನಂ.೭, ರೇಸ್ ಕೋರ್ಸ್ ರಸ್ತೆ, ನವದೆಹಲಿ. ಅದು 5 ನಿವಾಸಗಳ ಬೃಹತ್ ವಸತಿ ಸೌಕರ್ಯ ಹೊಂದಿದೆ. ಕಚೇರಿಯು ರೈಸೀನಾ ಹಿಲ್ಸ್ ನಲ್ಲಿರುವ ಸೌತ್ ಬ್ಲಾಕ್ ನಲ್ಲಿದೆ. 2014 ರಿಂದ: ಪ್ರಧಾನ ಮಂತ್ರಿಯಾಗಿ ನಿಯೋಜಿತವಾಗಿರುವ ನರೇಂದ್ರ ಮೋದಿ ಅವರು ತಿಂಗಳಿಗೆ 1.6 ಲಕ್ಷ ರೂ. ಮೂಲ ವೇತನ:(ವರ್ಷಕ್ಕೆ 19.2 ಲಕ್ಷ ರೂಪಾಯಿ) 50,000. ಉಳಿದದ್ದಷ್ಟೂ ಇತರೆ ಭತ್ಯೆಗಳ ಲೆಕ್ಕದಲ್ಲಿ ಬರುತ್ತದೆ. ಇದರ ಜತೆಗೆ ಖಾಸಗಿ ಸಿಬ್ಬಂದಿ, ವಿಶೇಷ ವಿಮಾನ ಮತ್ತಿತರ ಸವಲತ್ತುಗಳೂ ಇರುತ್ತವೆ. == ಈವರೆಗಿನ ಪ್ರಧಾನಿಗಳ ಪಟ್ಟಿ == == ಉಲ್ಲೇಖಗಳು == == ಬಾಹ್ಯ ಸಂಪರ್ಕ == ಅಧಿಕೃತ ತಾಣ